'ಮಲೆನಾಡ ಗಾಂಧಿ' ಎಂದೇ ಪ್ರಸಿದ್ಧರಾಗಿದ್ದ ಎಚ್ ಜಿ ಗೋವಿಂದೇಗೌಡರು ಕರ್ನಾಟಕ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಹೆಸರು ಮಾಡಿದವರು. ಅವರ ಅಧಿಕಾರಾವಧಿಯಲ್ಲಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿದರು. 1999ರಲ್ಲಿ ರಾಜಕೀಯ ನಿವೃತ್ತಿ ಹೊಂದಿದರು. == ಜನನ == ಎಚ್. ಜಿ. ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕಾನೂರು ಗ್ರಾಮದ ಹಿಣಚಿಯಲ್ಲಿ 1926 ಮೇ 26ರಂದು ಜನಿಸಿದರು. == ವೈವಾಹಿಕ ಬದುಕು == ಅವರಿಗೆ ಐದು ಜನ ಹೆಣ್ಣು ಮಕ್ಕಳೂ, ಓರ್ವ ಪುತ್ರನೂ ಇದ್ದಾರೆ. == ಸಾಧನೆ == ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಗೋವಿಂದೇಗೌಡರು ಕರ್ನಾಟಕದ ಶಿಕ್ಷಣ ಮಂತ್ರಿಯಾಗಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿ ದಾಖಲೆಗೈದಿದ್ದಾರೆ. ಶಿಕ್ಷಕ ಹುದ್ದೆಯ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಕಲ್ಪಿಸಿದ ಹೆಗ್ಗಳಿಕೆಯೂ ಅವರಿಗಿದೆ. == ಮರಣ == ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕೊಪ್ಪದಲ್ಲಿ 2016 ಜನವರಿ 6ರಂದು ನಿಧನರಾದರು.